breking news BLINKING

Example of a blinking text using CSS within a marquee ಮಂಗಳೂರು: ನಿಷೇಧಾಜ್ಞೆ ಜಾರಿಯಲ್ಲಿದೆ. ಸದ್ಯಕ್ಕೆ ಪರಿಸ್ಥಿತಿ ಶಾಂತವಾಗಿದೆ. ಶೀಘ್ರದಲ್ಲೇ ಕೊಲೆ ಆರೋಪಿಗಳನ್ನು ಬಂಧಿಸಲಾಗುವುದು. ಸೂಕ್ಷ್ಮ ಪರಿಸ್ಥಿತಿ ಹಿನ್ನೆಲೆ ಹೆಚ್ಚುವರಿ ಪೊಲೀಸರ ನಿಯೋಜನೆ ಮಾಡಲಾಗಿದೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಹೇಳಿಕೆ ನೀಡಿದರು. ಅಹಿತಕರ ಘಟನೆಗಳು ನಡೆಯದಂತೆ ಕ್ರಮ ವಹಿಸಲಾಗಿದೆ. ಕಮಿಷನರೇಟ್ ವ್ಯಾಪ್ತಿಯಲ್ಲಿ 19 ಚೆಕ್​ಪೋಸ್ಟ್ ಸ್ಥಾಪನೆ ಮಾಡಿದ್ದು, ಪ್ರತಿ ಚೆಕ್​ಪೋಸ್ಟ್​​ನಲ್ಲಿ 7 ರಿಂದ 8 ಸಿಬ್ಬಂದಿ ಇರಲಿದ್ದಾರೆ. ಚೆಕ್​ಪೋಸ್ಟ್​ನಲ್ಲಿ ಸಿಬ್ಬಂದಿ 24×7 ಕಾರ್ಯನಿರ್ವಹಿಸುತ್ತಾರೆ. ಭಯದ ವಾತಾವರಣ ಹೋಗಲಾಡಿಸಲು ರೂಟ್ ಮಾರ್ಚ್ ಮಾಡಲಾಗಿದೆ. ಸಾರ್ವಜನಿಕರು ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದೆ. ತನಿಖೆ ಒಳ್ಳೆ ರೀತಿಯಲ್ಲಿ ಹೋಗುತ್ತಿದೆ ಆರೋಪಿಗಳು ಆದಷ್ಟು ಬೇಗ ಸಿಗುವ ವಿಶ್ವಾಸವಿದೆ ಎಂದು ಹೇಳಿದರು..
No Comment
Add Comment
comment url