ಎಸ್.ಎಂ.ಎಸ್ ಕಾಲೇಜು ಬ್ರಹ್ಮಾವರ,ಎನ್.ಎಸ್.ಎಸ್. ಘಟಕದ ವತಿಯಿಂದ “ಡೆಂಗ್ಯೂ ಮತ್ತು ಕಾಲರಾ ಜಾಗೃತಿ” ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮ-webnews kannada
ಎಸ್.ಎಂ.ಎಸ್ ಕಾಲೇಜು ಬ್ರಹ್ಮಾವರ,ಎನ್.ಎಸ್.ಎಸ್. ಘಟಕದ ವತಿಯಿಂದ “ಡೆಂಗ್ಯೂ ಮತ್ತು ಕಾಲರಾ ಜಾಗೃತಿ” ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮ

ಎಸ್.ಎಂ.ಎಸ್ ಕಾಲೇಜು ಬ್ರಹ್ಮಾವರ,ಎನ್.ಎಸ್.ಎಸ್. ಘಟಕದ ವತಿಯಿಂದ “ಡೆಂಗ್ಯೂ ಮತ್ತು ಕಾಲರಾ ಜಾಗೃತಿ” ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮ-webnews kannada
ಎಸ್.ಎಂ.ಎಸ್ ಕಾಲೇಜು ಬ್ರಹ್ಮಾವರ,ಎನ್.ಎಸ್.ಎಸ್. ಘಟಕದ ವತಿಯಿಂದ “ಡೆಂಗ್ಯೂ ಮತ್ತು ಕಾಲರಾ ಜಾಗೃತಿ” ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಸಂಪನ್ಮೂಲ ವ್ಯಕ್ತಿಯಾದ ಡಾ. ಮಹೇಶ್ ಐತಾಳ್ ಅವರು ಡೆಂಗ್ಯೂ ಮತ್ತು ಕಾಲರಾ ರೋಗಗಳ ಲಕ್ಷಣಗಳು, ಕಾರಣಗಳು ಹಾಗೂ ತಡೆಗಟ್ಟುವ ಕ್ರಮಗಳ ಬಗ್ಗೆ ವಿದ್ಯಾರ್ಥಿಗಳಿಗೆ ವಿವರವಾಗಿ ಮಾಹಿತಿ ನೀಡಿದರು. ಅವರು ಶುದ್ಧ ಕುಡಿಯುವ ನೀರಿನ ಬಳಕೆ, ಸುತ್ತಮುತ್ತಲಿನ ಸ್ವಚ್ಛತೆ, ನಿಂತ ನೀರಿನ ನಿವಾರಣೆ ಹಾಗೂ ಸಮಯೋಚಿತ ವೈದ್ಯಕೀಯ ಚಿಕಿತ್ಸೆ ಅಗತ್ಯತೆ ಬಗ್ಗೆ ವಿಶೇಷವಾಗಿ ಮಾತನಾಡಿದರು.ಕಾಲೇಜಿನ ಪ್ರಾಚಾರ್ಯರಾದ ಡಾ. ರಾಬರ್ಟ್ ರೋಡ್ರಿಗೆಸ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ವಿದ್ಯಾರ್ಥಿಗಳಿಗೆ ಆರೋಗ್ಯದ ಮಹತ್ವವನ್ನು ತಿಳಿಸಿದರು ಹಾಗೂ ಇಂತಹ ಜಾಗೃತಿ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಕರೆ ನೀಡಿದರು.ಏನ್.ಎಸ್ .ಎಸ್ ಯೋಜನಾದಿಕಾರಿಯಾದ ಪ್ರಸನ್ನ ಶೆಟ್ಟಿ ಇವರು ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಕಾರ್ಯಕ್ರಮದಲ್ಲಿ ಯೋಜನಾಧಿಕಾರಿಗಳಾದ ಪ್ರಕಾಶ್ ಹಾಗು ಸಹ ಯೋಜನಾಧಿಕಾರಿಗಳಾದ ಡಾ .ಮಂಜುನಾಥ್ ಉಡುಪ ಮತ್ತು ಕುಂ . ರಂಜಿನಿ ಇವರು ಉಪಸ್ಥಿತರಿದ್ದರು.ಪ್ರಥಮ ಹಾಗು ದ್ವಿತೀಯ ವರ್ಷದ ಎನ್.ಎಸ್.ಎಸ್. ಸ್ವಯಂಸೇವಕರು ಸಕ್ರಿಯವಾಗಿ ಭಾಗವಹಿಸಿದರು.ಏನ್.ಎಸ .ಎಸ ನಾಯಕರಾದ ಸಹನಾ ಹಾಗು ವಿಖಿಲ್ ಇವರು ಕಾರ್ಯಕ್ರಮವನ್ನು ನಿರೂಪಿಸಿದರು.ಕಾರ್ಯಕ್ರಮದ ಅಂತ್ಯದಲ್ಲಿ ಎನ್.ಎಸ್.ಎಸ್. ಘಟಕಗಳ ನಾಯಕನಾದ ಸುಜನ್ ಇವರು ಧನ್ಯವಾದ ಸಮರ್ಪಣೆಗೈದರು.