ಸರ್ಪ ಶಾಪ ಎಂದರೇನು ಮತ್ತು ಅದರಿಂದ ಹೇಗೆ ಮುಕ್ತಿ ಪಡೆಯಬಹುದು ಎಂಬುದರ ಕುರಿತು ಖ್ಯಾತ ಜ್ಯೋತಿಷಿ ಹಾಗೂ ವಾಸ್ತು ತಜ್ಞ ಡಾ. ಬಸವರಾಜ ಗುರೂಜಿ ಮಾಹಿತಿ ನೀಡಿದ್ದಾರೆ. ಸರ್ಪ ಶಾಪ ಮತ್ತು ಸರ್ಪ ದೋಷದ ನಡುವೆ ವ್ಯತ್ಯಾಸವಿದೆ ಎಂದು ಅವರು ಹೇಳಿದ್ದು, ಸರ್ಪ ಶಾಪ ವಂಶಪಾರಂಪರ್ಯವಾಗಿ ಬರುವ ಒಂದು ಅಗೋಚರ ಶಾಪವಾಗಿದೆ ಎಂದಿದ್ದಾರೆ. ಜಾತಕದಲ್ಲಿ ಲಗ್ನದಿಂದ ನವಮದಲ್ಲಿ ರಾಹು ಮತ್ತು ಮಂಗಳನ ದೃಷ್ಟಿ ಇರುವುದು ಸರ್ಪ ಶಾಪದ ಸೂಚನೆಯಾಗಿದೆ. ಈ ಶಾಪದಿಂದ ಸಂತಾನ ಸಮಸ್ಯೆಗಳು, ಮಾನಸಿಕ ಯಾತನೆ ಮತ್ತು ಕುಟುಂಬದಲ್ಲಿ ಅಶಾಂತಿ ಉಂಟಾಗಬಹುದು. ಪರಿಹಾರವಾಗಿ ನವಗ್ರಹ ಪ್ರತಿಷ್ಠಾಪನೆ, ಶಿವನಿಗೆ 108 ದಿನಗಳ ಅಭಿಷೇಕ, ನಾಗ ಪ್ರತಿಷ್ಠೆ, ಅಥವಾ ಅಂಗವಿಕಲರಿಗೆ ಸಹಾಯ ಮಾಡುವುದನ್ನು ಸೂಚಿಸಲಾಗಿದೆ. ಇವುಗಳ ಜೊತೆಗೆ, ಅನಾಥರಿಗೆ ಸೇವೆ ಸಲ್ಲಿಸುವುದರಿಂದಲೂ ಪರಿಹಾರ ಸಿಗಬಹುದು. ಎಲ್ಲವೂ ನಂಬಿಕೆಯ ಮೇಲೆ ಅವಲಂಬಿತವಾಗಿದೆ ಎಂದು ಗುರೂಜಿ ಹೇಳಿದ್ದಾರೆ.  webnews kannada      ಇದು ಕನ್ನಡಿಗರ ಸುದ್ದಿ ತಾಣ.
WebNews Live :- ವಿವಾಹ ಸಮಾರಂಭ, ಕಂಬಳ, ಜಾತ್ರೋತ್ಸವ, ನಾಟಕ, ಕ್ರೀಡೆ, ಯಕ್ಷಗಾನ, ಶಾಲಾ ಕಾಲೇಜುಗಳ ಕಾರ್ಯಕ್ರಮ, ಸಭಾ ಕಾರ್ಯಕ್ರಮ,ರಾಜಕೀಯ ಕಾರ್ಯಕ್ರಮ, ಹಾಗು ಇನ್ನಿತರ ಯಾವುದೇ ಶುಭಸಮಾರಂಭಗಳ ನೇರಪ್ರಸಾರಗಾಗಿ ಸಂಪರ್ಕಿಸಿ : 9483578321..

ಉದ್ಯಮದಲ್ಲಿ ವರ್ತನೆ, ಕುತೂಹಲ, ಶಿಸ್ತು, ಬದ್ಧತೆ ಮುಖ್ಯ- ವಿಶ್ವೇಶ್ವರ ಪ್ರಸಾದ್

ಉದ್ಯಮದಲ್ಲಿ ವರ್ತನೆ, ಕುತೂಹಲ, ಶಿಸ್ತು, ಬದ್ಧತೆ ಮುಖ್ಯ-ವಿಶ್ವೇಶ್ವರ ಪ್ರಸಾದ್ webnews kannada 

ಉದ್ಯಮದಲ್ಲಿ ವರ್ತನೆ, ಕುತೂಹಲ, ಶಿಸ್ತು, ಬದ್ಧತೆ ಮುಖ್ಯ- ವಿಶ್ವೇಶ್ವರ ಪ್ರಸಾದ್
ಉದ್ಯಮದಲ್ಲಿ ವರ್ತನೆ, ಕುತೂಹಲ, ಶಿಸ್ತು, ಬದ್ಧತೆ ಮುಖ್ಯ-
ವಿಶ್ವೇಶ್ವರ ಪ್ರಸಾದ್


ಉಜಿರೆ : ಜೀವನ  ಅನ್ನುವಂತಹದ್ದು ಬಹಳ ದೀರ್ಘವಾಗಿವಂತಹದ್ದು ಹೇಳಿ ನಾವು ಯಾವತ್ತೂ  ಈ  ಭೂಮಿ ಮೇಲೆ ಜನ್ಮ ಪಡೆಯುತ್ತೇವೆ. ಅಥವಾ ಮರಣ ಹೊಂದುತ್ತೇವೆ ಎಂದು ಎರಡು ಸಹ ನಮಗೆ ಗೊತ್ತಿರುವುದಿಲ್ಲ.  ಅರ್ಜಿ ಹಾಕಿ ಬರುವಂತದಲ್ಲ, ಅರ್ಜಿ ಹೋಗುವಂತದ್ದಲ್ಲ ಆದರೆ ಈ ಜೀವನಕ್ಕೆ ಬಂದ ಮೇಲೆ ನಾವು ಏನು ಮಾಡಬೇಕು ಅಥವಾ ಏನು ಮಾಡಲು ಬಾರದು ಅನ್ನವಂತಹದ್ದು ತಿಳಿಯಬೇಕು.  ಎಲ್ಲರನ್ನೂ ನೆನಪು ಇಟ್ಟುಕೊಳ್ಳುವುದಿಲ್ಲ, ಕೆಲವು ಸಾಧಕರನ್ನು ಮಾತ್ರ ನೆನಪಿಸಿಕೊಳ್ಳುತ್ತಾರೆ. ಇವತ್ತಿನ ಬದಲಾದ ಜೀವನ ಶೈಲಿಯಲ್ಲಿ  ಬೇರೆ ಎಲ್ಲ ವೃತ್ತಿಕ್ಕಿಂತ ಸ್ವಂತ  ಉದ್ಯಮ ಮಾಡುವುದೇ ಸೂಕ್ತ  ಎಂದು ಭಾವಿಸುತ್ತದೆ.   ಜಗತ್ತಿ ಅತ್ಯಂತ ಶ್ರೀಮಂತ ವ್ಯಕ್ತಿಗಳು ಪಟ್ಟಿಯಲ್ಲಿ ಶೇಕಾಡ 83 ಜನ ಸ್ವಂತ  ಉದ್ಯಮಿಗಳು ಇದ್ದಾರೆ. ಹಾಗಾಗಿ ಈ ಉದ್ಯಮ ನಡೆಸಲು ನಿಮ್ಮ ವರ್ತನೆಯ ಮೇಲೆ ಹೆಚ್ಚಿನ ಗಮನ ಇರಿಸಬೇಕು. ನಿಮ್ಮಲ್ಲಿ ಉತ್ತಮ ಮನೋಭಾವ  ಇದ್ದರೆ ಸಾಧನೆ ಸುಲಭ ಸಾಧ್ಯ. ವೃತ್ತಿಯಲ್ಲಿ ನಿರಂತರ ಕಲಿಕೆ ಇರುಬೇಕು ಅದಕ್ಕೆ ಕುತೂಹಲ ಇರಬೇಕು. ವೃತ್ತಿಯಲ್ಲಿ ಸ್ವಯಂ ಶಿಸ್ತು ಅಳವಡಿಸಿಕೊಳ್ಳಬೇಕು ಹಾಗೂ ವ್ಯವಹಾರದಲ್ಲಿ ಬದ್ಧತೆ ಇಟ್ಟುಕೊಂಡು ಮುಂದುವರೆಯಬೇಕು. ಉದ್ಯಮದಲ್ಲಿ ಕೆಲವೊಂದು ಸಲ ಸಮಸ್ಯೆಗಳು ಬರುತ್ತೇವೆ. ನಿಮ್ಮ ಕೆಲಸ ಜನರ ಸಮಸ್ಯೆಗಳಿಗೆ ಸ್ವಂದಿಸಿ  ಉತ್ತಮ ಸೇವೆಯನ್ನು ಕೊಡಿ  ಎಂದು ವೇಣೂರು  ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೈಗಾರಿಕಾ ತರಬೇತಿ ಸಂಸ್ಥೆ (ಐಟಿಐ), ಪ್ರಾಶುಂಪಾಲರಾದ ಶ್ರೀ ವಿಶ್ವೇಶ್ವರ  ಪ್ರಸಾದ್ ಅಭಿಪ್ರಾಯಪಟ್ಟರು.


ಉಜಿರೆ ರುಡ್ ಸೆಟ್ ಸಂಸ್ಥೆಯಲ್ಲಿ 30 ದಿನಗಳ ಕಾಲ ನಡೆದೆ * ಇಲೆಕ್ಟ್ರಿಕಲ್‌ ಮೋಟಾರು ರಿವೈಂಡಿಂಗ್‌ ಮತ್ತು ಪಂಪ್‌ ಸೆಟ್‌ ರಿಪೇರಿ  ತರಬೇತಿಯ  ಸಮಾರೋಪ ಸಮಾರಂಭದಲ್ಲಿ  ಮುಖ್ಯ ಅತಿಥಿಯಾಗಿ ಭಾಗವಹಿಸಿ, ಪ್ರಮಾಣ ಪತ್ರ  ವಿತ್ತರಿಸಿ ಮಾತನಾಡಿದರು. ಮೌಲ್ಯ ಮತ್ತು ಕೌಶಲ್ಯವನ್ನು ಸದ್ಬಳಕೆ ಮಾಡಿಕೊಳ್ಳಿ ಎಂದು ಶುಭ ಹಾರೈಸಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು  ರುಡ್ ಸೆಟ್ ಸಂಸ್ಥೆಯ *ನಿರ್ದೇಶಕರಾದ ಶ್ರೀ ಅಜೇಯ* ವಹಿಸಿ, ಮಾತನಾಡಿದರು ಸರಕಾರ ಮತ್ತು ಬ್ಯಾಂಕಿನ ಹೊಸ ಯೋಜನೆಯ ಮೂಲಕ ಸಹಾಯಧನ, ಸಾಲ ಪಡೆದುಕೊಂಡು ಉದ್ಯಮ ಆರಂಭಿಸಿ, ಏನಾದರೂ ಮಾಹಿತಿ-ಮಾರ್ಗದರ್ಶನ ಬೇಕಾದರೆ ಸಂಸ್ಥೆಯನ್ನು ಸಂಪರ್ಕಿಸಿ ಎಂದು ಶುಭ ಕೋರಿದರು.

ಅತಿಥಿಗಳನ್ನು ರುಡ್ ಸೆಟ್ ಸಂಸ್ಥೆಯ *ಹಿರಿಯ ಉಪನ್ಯಾಸಕರಾದ *ಅಬ್ರಹಾಂ ಜೇಮ್ಸ್* ಅವರು ಸ್ವಾಗತಿಸಿದರು. ಸಂಸ್ಥೆಯ *ಉಪನ್ಯಾಸಕರಾದ *ಕೆ.ಕರುಣಾಕರ ಜೈನ್* ಕಾರ್ಯಕ್ರಮ ನಿರೂಪಿಸಿದರು  ವಂದಿಸಿದರು. ತೇಜಸ್ಸು ಪ್ರಾರ್ಥನೆ ಮಾಡಿದರು, ಆನಂದ, ರೋಹಿತ್, ಸಂಗಮೇಶ್ ತರಬೇತಿಯ ಅನುಭವ ಹಂಚಿಕೊಂಡರು.

Next Post Previous Post
No Comment
Add Comment
comment url