ಸರ್ಪ ಶಾಪ ಎಂದರೇನು ಮತ್ತು ಅದರಿಂದ ಹೇಗೆ ಮುಕ್ತಿ ಪಡೆಯಬಹುದು ಎಂಬುದರ ಕುರಿತು ಖ್ಯಾತ ಜ್ಯೋತಿಷಿ ಹಾಗೂ ವಾಸ್ತು ತಜ್ಞ ಡಾ. ಬಸವರಾಜ ಗುರೂಜಿ ಮಾಹಿತಿ ನೀಡಿದ್ದಾರೆ. ಸರ್ಪ ಶಾಪ ಮತ್ತು ಸರ್ಪ ದೋಷದ ನಡುವೆ ವ್ಯತ್ಯಾಸವಿದೆ ಎಂದು ಅವರು ಹೇಳಿದ್ದು, ಸರ್ಪ ಶಾಪ ವಂಶಪಾರಂಪರ್ಯವಾಗಿ ಬರುವ ಒಂದು ಅಗೋಚರ ಶಾಪವಾಗಿದೆ ಎಂದಿದ್ದಾರೆ. ಜಾತಕದಲ್ಲಿ ಲಗ್ನದಿಂದ ನವಮದಲ್ಲಿ ರಾಹು ಮತ್ತು ಮಂಗಳನ ದೃಷ್ಟಿ ಇರುವುದು ಸರ್ಪ ಶಾಪದ ಸೂಚನೆಯಾಗಿದೆ. ಈ ಶಾಪದಿಂದ ಸಂತಾನ ಸಮಸ್ಯೆಗಳು, ಮಾನಸಿಕ ಯಾತನೆ ಮತ್ತು ಕುಟುಂಬದಲ್ಲಿ ಅಶಾಂತಿ ಉಂಟಾಗಬಹುದು. ಪರಿಹಾರವಾಗಿ ನವಗ್ರಹ ಪ್ರತಿಷ್ಠಾಪನೆ, ಶಿವನಿಗೆ 108 ದಿನಗಳ ಅಭಿಷೇಕ, ನಾಗ ಪ್ರತಿಷ್ಠೆ, ಅಥವಾ ಅಂಗವಿಕಲರಿಗೆ ಸಹಾಯ ಮಾಡುವುದನ್ನು ಸೂಚಿಸಲಾಗಿದೆ. ಇವುಗಳ ಜೊತೆಗೆ, ಅನಾಥರಿಗೆ ಸೇವೆ ಸಲ್ಲಿಸುವುದರಿಂದಲೂ ಪರಿಹಾರ ಸಿಗಬಹುದು. ಎಲ್ಲವೂ ನಂಬಿಕೆಯ ಮೇಲೆ ಅವಲಂಬಿತವಾಗಿದೆ ಎಂದು ಗುರೂಜಿ ಹೇಳಿದ್ದಾರೆ.  webnews kannada      ಇದು ಕನ್ನಡಿಗರ ಸುದ್ದಿ ತಾಣ.
WebNews Live :- ವಿವಾಹ ಸಮಾರಂಭ, ಕಂಬಳ, ಜಾತ್ರೋತ್ಸವ, ನಾಟಕ, ಕ್ರೀಡೆ, ಯಕ್ಷಗಾನ, ಶಾಲಾ ಕಾಲೇಜುಗಳ ಕಾರ್ಯಕ್ರಮ, ಸಭಾ ಕಾರ್ಯಕ್ರಮ,ರಾಜಕೀಯ ಕಾರ್ಯಕ್ರಮ, ಹಾಗು ಇನ್ನಿತರ ಯಾವುದೇ ಶುಭಸಮಾರಂಭಗಳ ನೇರಪ್ರಸಾರಗಾಗಿ ಸಂಪರ್ಕಿಸಿ : 9483578321..

ಭಾರತೀಯ ರೆಡ್ ಕ್ರಾಸ್ ಸಂಸ್ಥೆ,ಬ್ರಹ್ಮಾವರ ತಾಲೂಕು ಶಾಖೆ ಯ ಮಹಾಸಭೆ-webnews kannada

ಭಾರತೀಯ ರೆಡ್ ಕ್ರಾಸ್ ಸಂಸ್ಥೆ,ಬ್ರಹ್ಮಾವರ ತಾಲೂಕು ಶಾಖೆ ಯ ಮಹಾಸಭೆ-webnews kannada

ಭಾರತೀಯ ರೆಡ್ ಕ್ರಾಸ್ ಸಂಸ್ಥೆ,ಬ್ರಹ್ಮಾವರ ತಾಲೂಕು ಶಾಖೆ ಯ ಮಹಾಸಭೆ-webnews kannada
ಭಾರತೀಯ ರೆಡ್ ಕ್ರಾಸ್ ಸಂಸ್ಥೆ,ಬ್ರಹ್ಮಾವರ ತಾಲೂಕು ಶಾಖೆ ಯ ಮಹಾಸಭೆ-webnews kannada


ಬ್ರಹ್ಮಾವರ: ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಬ್ರಹ್ಮಾವರ ತಾಲೂಕು ಶಾಖೆಯ ಮಹಾಸಭೆಯು ತಾರೀಕು  16-10-2025 ರಂದು  ಶ್ರೀಯುತ ಶ್ರೀಕಾಂತ್ ಎಸ್. ಹೆಗ್ಡೆ , ತಹಸಿಲ್ದಾರ್,ಬ್ರಹ್ಮಾವರ ಇವರ ಅನಪಸ್ಥಿತಿಯಲ್ಲಿ ಉಪ ತಹಸಿಲ್ದಾರರಾದ ಶ್ರೀಯುತ ಚಂದ್ರಹಾಸ ಬಂಗೇರ ಅವರ ಅಧ್ಯಕ್ಷತೆಯಲ್ಲಿ ಬ್ರಹ್ಮಾವರದ ಹಿರಿಯ ನಾಗರಿಕರ ಸಂಘದ ಸಭಾಂಗಣದಲ್ಲಿ ಜರಗಿತು. ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯದ IRCS ನ ಸಭಾಪತಿಗಳಾದ ಬಸ್ರೂರು ರಾಜೀವ್ ಶೆಟ್ಟಿ ಮತ್ತು IRCS, ಕುಂದಾಪುರ ಇದರ ಸಭಾಪತಿಗಳಾದ ಶ್ರೀಯುತ ಜಯಕರ ಶೆಟ್ಟಿ ಹಾಗೂ ಖಜಾಂಚಿಗಳಾದ ಶ್ರೀಯುತ ಶಿವರಾಮ ಶೆಟ್ಟಿ ಉಪಸ್ಥಿತರಿದ್ದರು.  ಪ್ರಾರ್ಥನೆಯನ್ನು ಶ್ರೀಯುತ ಹರಿo

 ನಾಥ್ ಶೆಟ್ಟಿ ಗೈದರು. IRCS, ಬ್ರಹ್ಮಾವರ ಶಾಖೆಯ ಸಭಾಪತಿಗಳಾದ ಶ್ರೀಯುತ ರಾಜಾರಾಮ್ ಶೆಟ್ಟಿಯವರು ಆಗಮಿಸಿದ ಎಲ್ಲರನ್ನೂ ಸ್ವಾಗತಿಸಿದರು. ಕಾರ್ಯದರ್ಶಿಗಳಾದ ಶ್ರೀಯುತ ಗಣೇಶ್ ಉಪಾಧ್ಯಾಯರು ವರದಿಯನ್ನು ವಾಚಿಸಿದರು. ಲೆಕ್ಕಪತ್ರವನ್ನು ಶ್ರೀಯುತ ಉದಯ್ ಕುಮಾರ್ ಶೆಟ್ಟಿ ಅವರು ಸಭೆಯಲ್ಲಿ ಮಂಡಿಸಿದರು. ಚುನಾವಣಾಧಿಕಾರಿಗಳಾದ ಶ್ರೀಯುತ ಹರಿಂದ್ರನಾಥ್ ಶೆಟ್ಟಿ ಯವರು 2025 ರಿಂದ 2028 ರವರೆಗೆ ಹೆಸರನ್ನು ನೀಡಿದ ಹತ್ತು ಜನರ ಕಾರ್ಯಕಾರಿ ಸಮಿತಿಯ ಸದಸ್ಯರ ಪಟ್ಟಿಯನ್ನು ಓದಿ ಎಲ್ಲರಿಂದಲೂ ಅನುಮೋದನೆ ಪಡೆದುಕೊಳ್ಳಲಾಯಿತು. ಲೆಕ್ಕಪರಿಶೋಧಕರಾಗಿ ಸಿ ಎ ಪದ್ಮನಾಭ ಕಾಂಚನ್ ರವರನ್ನು ಆಯ್ಕೆ ಮಾಡಲಾಯಿತು. ಬ್ರಹ್ಮಾವರ ತಾಲೂಕಿನ ಉಪ ತಹಸೀಲ್ದಾರಾದ ಶ್ರೀಯುತ ಚಂದ್ರಹಾಸ ಬಂಗೇರರವರು ಅಧ್ಯಕ್ಷೀಯ ಮಾತುಗಳ ನಾಡುತ್ತ IRCS,ಬ್ರಹ್ಮಾವರ ಶಾಖೆಯ ಎಲ್ಲಾ ಕಾರ್ಯಚಟುವಟಿಕೆಗಳಿಗೆ ತಮ್ಮ ಪೂರ್ಣ ಸಹಕಾರವನ್ನು ನೀಡುವುದಾಗಿ ಆಶ್ವಾಸನೆ ನೀಡಿದರು. Major. ಜಿ ಬಾಲಕೃಷ್ಣ ಶೆಟ್ಟಿಯವರು ವಂದನಾರ್ಪಣೆ ನೀಡಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು. ತದನಂತರ ನಡೆದ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ IRCS, ಬ್ರಹ್ಮಾವರ ಶಾಖೆಗೆ ಈ ಕೆಳಗಿನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು:-

1. ಅಧ್ಯಕ್ಷರು:  ಶ್ರೀಕಾಂತ್ ಎಸ್. ಹೆಗ್ಡೆ,ತಹಸಿಲ್ದಾರರು ಬ್ರಹ್ಮಾವರ ತಾಲೂಕು

2. ಸಭಾಪತಿ: ಉದಯ್ ಕುಮಾರ್ ಶೆಟ್ಟಿ 

3. ಉಪ ಸಭಾಪತಿ:  ರಾಜಾರಾಮ್ ಶೆಟ್ಟಿ

4. ಕಾರ್ಯದರ್ಶಿ:ಮೇಜರ್ ಜಿ ಬಾಲಕೃಷ್ಣ ಶೆಟ್ಟಿ

5. ಖಜಾಂಜಿ:  ಭಾಸ್ಕರ್ ಎಂ ಶೆಟ್ಟಿ

6. ಕಾರ್ಯಕಾರಿ ಸಮಿತಿಯ ಇತರ ಸದಸ್ಯರು:

ಎ ಬಾಲಕೃಷ್ಣ ಶೆಟ್ಟಿ

 ಭಾಸ್ಕರ್ ಶೆಟ್ಟಿ ,ಚಾಂತಾರು

  ಕೆ ಜಯರಾಮ ಶೆಟ್ಟಿ

 ಡಾ| ಮಹೇಶ್ ಐತಾಳ್

 ವರದಾನಂದ ಶೆಟ್ಟಿ 

ಸಂಕಯ್ಯ ಶೆಟ್ಟಿ

       ಕಾರ್ಯಕಾರಿ ಸಮಿತಿಗೆ Co- opt ಮಾಡಲಾದ ಇತರ ಸದಸ್ಯರು:-

ಶ್ರೀ ರಾಘವೇಂದ್ರ ಸಾಮಗ

ಶ್ರೀ ಹರಿಂದ್ರನಾಥ್ ಶೆಟ್ಟಿ

ಶ್ರೀ ದಿನೇಶ್ ನಾಯರಿ.

Next Post Previous Post
No Comment
Add Comment
comment url