ಅಭ್ಯುದಯ 2025 :ಎಸ್ ಎಮ್ ಎಸ್ ಕಾಲೇಜು, ಬ್ರಹ್ಮಾವರಕ್ಕೆ ಸಮಗ್ರ ಚಾಂಪಿಯನ್‌ಷಿಪ್ ಪ್ರಶಸ್ತಿ
ಅಭ್ಯುದಯ 2025 :ಎಸ್ ಎಮ್ ಎಸ್ ಕಾಲೇಜು, ಬ್ರಹ್ಮಾವರಕ್ಕೆ ಸಮಗ್ರ ಚಾಂಪಿಯನ್‌ಷಿಪ್ ಪ್ರಶಸ್ತಿ
![]() |
| ಅಭ್ಯುದಯ 2025 :ಎಸ್ ಎಮ್ ಎಸ್ ಕಾಲೇಜು, ಬ್ರಹ್ಮಾವರಕ್ಕೆ ಸಮಗ್ರ ಚಾಂಪಿಯನ್‌ಷಿಪ್ ಪ್ರಶಸ್ತಿ |
ಉಡುಪಿ ಜಿಲ್ಲೆಯ ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ, ತೆಂಕನಿಡಿಯೂರು ಇವರಿಂದ ಆಯೋಜಿಸಲಾದ “ಅಭ್ಯುದಯ 2025” ಅಂತರ ಕಾಲೇಜು ಸಮಾಜಕಾರ್ಯ ಸ್ಪರ್ಧೆಯಲ್ಲಿ ಎಸ್ ಎಮ್ ಎಸ್ ಕಾಲೇಜಿನ ವಿದ್ಯಾರ್ಥಿಗಳು ತಮ್ಮ ಪ್ರತಿಭೆ, ಶ್ರಮ ಮತ್ತು ತಂಡಭಾವವನ್ನು ಪ್ರದರ್ಶಿಸಿ, ಕೊಲಾಜ್ ತಯಾರಿಕೆ ಸ್ಪರ್ಧೆ ಯಲ್ಲಿ ಪ್ರಥಮ ಸ್ಥಾನ, ಪೋಸ್ಟರ್ ತಯಾರಿಕೆಯಲ್ಲಿ ದ್ವಿತೀಯ ಸ್ಥಾನ, ಮತ್ತು ಕ್ವಿಜ್ ನಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದಾರೆ. ಉಳಿದ ಎಲ್ಲಾ ಸ್ಪರ್ಧೆಯಲ್ಲಿ ಅತ್ಯುತಮ ಭಾಗವಹಿಸುವಿಕೆ ಮೂಲಕ ಕಾಲೇಜು ಒಟ್ಟು ಚಾಂಪಿಯನ್‌ಷಿಪ್ ಪ್ರಶಸ್ತಿಯನ್ನು ಮುಡಿಗೆರಿಸಿಕೊಂಡಿದೆ.
