ಸರ್ಪ ಶಾಪ ಎಂದರೇನು ಮತ್ತು ಅದರಿಂದ ಹೇಗೆ ಮುಕ್ತಿ ಪಡೆಯಬಹುದು ಎಂಬುದರ ಕುರಿತು ಖ್ಯಾತ ಜ್ಯೋತಿಷಿ ಹಾಗೂ ವಾಸ್ತು ತಜ್ಞ ಡಾ. ಬಸವರಾಜ ಗುರೂಜಿ ಮಾಹಿತಿ ನೀಡಿದ್ದಾರೆ. ಸರ್ಪ ಶಾಪ ಮತ್ತು ಸರ್ಪ ದೋಷದ ನಡುವೆ ವ್ಯತ್ಯಾಸವಿದೆ ಎಂದು ಅವರು ಹೇಳಿದ್ದು, ಸರ್ಪ ಶಾಪ ವಂಶಪಾರಂಪರ್ಯವಾಗಿ ಬರುವ ಒಂದು ಅಗೋಚರ ಶಾಪವಾಗಿದೆ ಎಂದಿದ್ದಾರೆ. ಜಾತಕದಲ್ಲಿ ಲಗ್ನದಿಂದ ನವಮದಲ್ಲಿ ರಾಹು ಮತ್ತು ಮಂಗಳನ ದೃಷ್ಟಿ ಇರುವುದು ಸರ್ಪ ಶಾಪದ ಸೂಚನೆಯಾಗಿದೆ. ಈ ಶಾಪದಿಂದ ಸಂತಾನ ಸಮಸ್ಯೆಗಳು, ಮಾನಸಿಕ ಯಾತನೆ ಮತ್ತು ಕುಟುಂಬದಲ್ಲಿ ಅಶಾಂತಿ ಉಂಟಾಗಬಹುದು. ಪರಿಹಾರವಾಗಿ ನವಗ್ರಹ ಪ್ರತಿಷ್ಠಾಪನೆ, ಶಿವನಿಗೆ 108 ದಿನಗಳ ಅಭಿಷೇಕ, ನಾಗ ಪ್ರತಿಷ್ಠೆ, ಅಥವಾ ಅಂಗವಿಕಲರಿಗೆ ಸಹಾಯ ಮಾಡುವುದನ್ನು ಸೂಚಿಸಲಾಗಿದೆ. ಇವುಗಳ ಜೊತೆಗೆ, ಅನಾಥರಿಗೆ ಸೇವೆ ಸಲ್ಲಿಸುವುದರಿಂದಲೂ ಪರಿಹಾರ ಸಿಗಬಹುದು. ಎಲ್ಲವೂ ನಂಬಿಕೆಯ ಮೇಲೆ ಅವಲಂಬಿತವಾಗಿದೆ ಎಂದು ಗುರೂಜಿ ಹೇಳಿದ್ದಾರೆ.  webnews kannada      ಇದು ಕನ್ನಡಿಗರ ಸುದ್ದಿ ತಾಣ.
WebNews Live :- ವಿವಾಹ ಸಮಾರಂಭ, ಕಂಬಳ, ಜಾತ್ರೋತ್ಸವ, ನಾಟಕ, ಕ್ರೀಡೆ, ಯಕ್ಷಗಾನ, ಶಾಲಾ ಕಾಲೇಜುಗಳ ಕಾರ್ಯಕ್ರಮ, ಸಭಾ ಕಾರ್ಯಕ್ರಮ,ರಾಜಕೀಯ ಕಾರ್ಯಕ್ರಮ, ಹಾಗು ಇನ್ನಿತರ ಯಾವುದೇ ಶುಭಸಮಾರಂಭಗಳ ನೇರಪ್ರಸಾರಗಾಗಿ ಸಂಪರ್ಕಿಸಿ : 9483578321..

ಮೊಂಥಾ ಸೈಕ್ಲೋಲ್ ಅಬ್ಬರ-webnews kannada

 ಮೊಂಥಾ ಸೈಕ್ಲೋಲ್ ಅಬ್ಬರ-webnews kannada

ಮೊಂಥಾ ಸೈಕ್ಲೋಲ್ ಅಬ್ಬರ-webnews kannada
ಮೊಂಥಾ ಸೈಕ್ಲೋಲ್ ಅಬ್ಬರ-webnews kannada

ಬಂಗಾಳಕೊಲ್ಲಿಯಲ್ಲಿ ಸೃಷ್ಟಿಯಾಗಿರುವ 'ಮೊಂಥಾ' ಚಂಡಮಾರುತ ರೌದ್ರಾವತಾರ ತಾಳುತ್ತಿದೆ. ಭಾರತದ ಪೂರ್ವ ಕರಾವಳಿಯತ್ತ ಮುನ್ನುಗ್ಗುತ್ತಿದೆ. ಈಗಾಗಲೇ ಆಂಧ್ರ, ಒಡಿಶಾ ಮತ್ತು ತಮಿಳುನಾಡಿನಲ್ಲಿ ಹೈ ಅಲರ್ಟ್ ಘೋಷಿಸಲಾಗಿದ್ದು, ನಾಳೆ ಸಂಜೆ ಅಥವಾ ರಾತ್ರಿ ಆಂಧ್ರ ಕರಾವಳಿಗೆ ಅಪ್ಪಳಿಸಲಿದ್ದು, ತಮಿಳುನಾಡು, ಆಂಧ್ರ, ಒಡಿಶಾ, ಪುದುಚೇರಿಯಲ್ಲಿ ಧಾರಾಕಾರ ಮಳೆಯಾಗಲಿದೆ. ಇದರ ನೇರ ಪರಿಣಾಮ ಕರ್ನಾಟಕದ ಮೇಲೂ ಆಗಲಿದೆ. ಹೀಗಾಗಿ ಮಲೆನಾಡು, ಕರಾವಳಿ ಜಿಲ್ಲೆಗಳಲ್ಲಿ ಮಳೆಯಾಗುವ ನಿರೀಕ್ಷೆಯಿದೆ.

Next Post Previous Post
No Comment
Add Comment
comment url