ಬಾಂಧವ್ಯ ಫೌಂಡೇಶನ್ ನಿಂದ ನೆರವು ಯೋಜನೆಯಿಂದ ಸಹಾಯ ಹಸ್ತ ಮತ್ತು ಕ್ರೀಡಾ ಸಮವಸ್ತ್ರ ವಿತರಣೆ
ಬಾಂಧವ್ಯ ಫೌಂಡೇಶನ್ ನಿಂದ ನೆರವು ಯೋಜನೆಯಿಂದ ಸಹಾಯ ಹಸ್ತ ಮತ್ತು ಕ್ರೀಡಾ ಸಮವಸ್ತ್ರ ವಿತರಣೆ - webnews kannada
ಅ 8 : ಬಾಂಧವ್ಯ ಫೌಂಡೇಶನ್ ನಿಂದ ನೆರವು ಯೋಜನೆಯಿಂದ ಪ್ರಧನ್ಯ ಎಂಬ ಬಾಲಕೀಯ ಕರುಳಿನ ಸಮಸ್ಯೆಗೆ ಇಂಜಕ್ಷನ್ ಗಾಗಿ ವೈದ್ಯಕೀಯ ನೆರವು 50,000/- ಸಾಂಕೇತಿಕವಾಗಿ ಹಸ್ತಾಂತರ ಮಾಡಲಾಯಿತು,ಮೊತ್ತವನ್ನು ಚಿಕಿತ್ಸೆ ಪಡೆಯುವ ಆಸ್ಪತ್ರೆಗೆ ಬಾಂಧವ್ಯ ಟ್ರಸ್ಟ್ ಮೂಲಕ ನೀಡಲಾಗುವುದು ಮತ್ತು ಬೋರ್ಡ್ ಶಾಲಾ ಮಕ್ಕಳಿಗೆ ರಾಜ್ಯ ಮಟ್ಟದಲ್ಲಿ ವಾಲಿಬಾಲ್ ಪ್ರತಿನಿದಿಸುವ 4 ತಂಡದ
45 ಮಕ್ಕಳಿಗೆ ಉತ್ತಮ ಗುಣಮಟ್ಟದ ಕ್ರೀಡಾ ಸಮವಸ್ತ್ರ ನೀಡಲಾಯಿತು, ಹಾಗೂ ದೂಳಂಗಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಂಗಾರಕಟ್ಟೆ ಶಾಲೆಯ 57 ಮಕ್ಕಳಿಗೆ ಐಡಿ ಕಾರ್ಡ್ ಮತ್ತು ಬೆಲ್ಟ್ ವಿತರಣೆ ಮಾಡಲಾಯಿತು,
ಈ ಸಂದರ್ಭದಲ್ಲಿ DG ಬ್ಯಾಟನ್ ಪ್ರಶಸ್ತಿ ವಿಜೇತ ಸುನೀಲ್ ಪಾಂಡೇಶ್ವರರವರಿಗೆ ಸನ್ಮಾನಿಸಲಾಯಿತು
ಕಾರ್ಯಕ್ರಮದಲ್ಲಿ ಬಾಂಧವ್ಯ ಸಂಸ್ಥೆಯ ಮುಖ್ಯಸ್ಥ ದಿನೇಶ್ ಬಾಂಧವ್ಯ ಅತಿಥಿಗಳನ್ನು ಸ್ವಾಗತಿಸಿ ಯೋಜನೆ ನೆಡೆದು ಬಂದ ದಾರಿ ಕುರಿತು ಪ್ರಾಸ್ತಾವಿಕ ಮಾತನಾಡಿದರು
ಈ ಸಂದರ್ಭದಲ್ಲಿ ಉದ್ಯಮಿ ಜೋಸೆಫ್ ಎಲಿಯಾಸ್ ಮೆನೇಜಸ್, ಬ್ರಹ್ಮಾವರ ಠಾಣೆ ASI ಜಯಕರ್ ಐರೋಡಿ, ಸಾಲೀಕೇರಿ ಶಾಖಾ ಅಂಚೆ ಪಾಲಕರಾದ ರೇಷ್ಮಾ ವಾಸುದೇವ ನಾಯಕ್, ಉಪಪ್ರಾoಶುಪಾಲರಾದ ಉಮಾ ಪಿ ತಾಲ್ಲೂಕು ಶಿಕ್ಷಣಾಧಿಕಾರಿ ನಿತ್ಯಾನಂದ ಶೆಟ್ಟಿ, ದೂಳಂಗಡಿ ಶಾಲೆ ಮುಖ್ಯೋಪಾಧ್ಯಯರಾದ ಪ್ರೆಸಿಲ್ಲಾ, ಹಿರಿಯ ದೈಹಿಕ ಶಿಕ್ಷಣ ಶಿಕ್ಷಕರಾದ ಜಗದೀಶ್. ಕೆ ಮತ್ತಿತರು ಉಪಸ್ಥಿತರಿದ್ದರು ದೈಹಿಕ ಶಿಕ್ಷಕಿ ಜಯಲಕ್ಷ್ಮಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು, ಸುಧೀರ್ ಬಿ ಪೂಜಾರಿ ಧನ್ಯವಾದ ಸಮರ್ಪಿಸಿದರು.
ಹುಲಿ



.jpg)